Saturday 15 October, 2011

ಬೃಹ್ಮಚಾರಿ ಜೀವನದ ಪಯಣ.....






 ಕೆಂಪು ಬಸ್ಸಿನಲ್ಲಿ ಒಂಟಿ ದೂರ ಪಯಣವಿಂದು
ಜೊಡಿ ಸೀಟಿನಲಿ ಕಿಡ್ಕಿಬದಿ ಸೀಟುನಂದು
ಕಪ್ಪು ಲಂಗ ಹಾಕಿ ಮುಂದೆ ನೀ ಬಂದು
ಕಳ್ಕೊಂಡೆ ನನ್ನ ಹೃದಯ ನಾ ಅಂದು

ಹಿಂದೆ, ಮುಂದೆ ಎಲ್ಲಾ ಸೀಟ್ ಕಾಲಿಯಾಗಿತ್ತೆ
ಬೃಹ್ಮಚಾರಿ ಪಕ್ಕದ ಸೀಟೆ ನಿನಗೆ ಬೇಕಿತ್ತೇ
ಕುತ್ಕೊಳ್ವಾಗ್ಲೆ ದಾವಣಿ ಹಾರಿ ಮುಕದ್ಮೆಲೆ ಬೀಳ್ಬೆಕಿತ್ತೇ
ಅಲ್ಲಿಗೆ ನನ್ನ ಬೃಹ್ಮಚಾರಿ ಜೀವನವೇ ಮುಗಿದೊಗಿತ್ತೇ.

ಬಂದಂತೆ ಬಾರದ ಆ ನಿದ್ದೆಯನ್ನು
ತಂದ್ಕೊಂಡು ಮೈಮೇಲೆ ಬಿದ್ದೆ ನೀನು
ಹೀಗೆ ಮಾಡಿದರೆ ಬೃಹ್ಮಚಾರಿ ಗತಿಯೇನು
ಆದರೂನು ನಿನ್ನಂದಕೆ ಸೋತೆ ನಾನು

ದೂರದ ಪಯಣ ಮುಗಿಯುವ ವೇಳೆಗೆ
ನ್ನಯ ಹೃದಯ ಹೇಳಿತು ಕೊನೆಗೆ..
ಕೊಡುವೆನು ಈ ತನು ಮನುವನು ನಿನಗೆ..
ಕೊಡುವೆಯಾ ನಿನ್ ಪೊನ್ ನಂ ನನಗೆ

       ನಂದು..143
       ನಿಂದು.............

Monday 3 October, 2011

ಪ್ರೀತಿ

ಮೊದಲ ಸ್ಪರ್ಶ ಮಂಜಿನ ಹನಿಯಂತೆ
ಮೊದಲ ಮಾತು ನಾದದ ಅಲೆಯಂತೆ
ನಿನ್ನ ಕಾಣುವ ಕನಸು ಈಗ
ಸ್ವರ್ಗವೇ ಕೈಗೆ ಸಿಕ್ಕಂತೆ ಆಗ

ನಿನ್ನ ನೋಡಿ ಹಳ್ಳಕ್ಕೆ ಬಿದ್ದೆ
ಮನವ ಯಾಕೆ ಆಗಲೇ ಕದ್ದೆ
ಮನದಿ ನನಗೆ ನಾನೇ ಮಾಲಿಕನಾಗಿದ್ದೆ
ಕಂಡೊಡನೆ ನಿನ್ನ ಪ್ರೆಮಕ್ಕೆ ಮಾಲಿಯಾದೆ

ಹೃದಯ ಬಯಸುತಿದೆ ಬಂದಾಗ ನೀನು
ಮಾತಾಡು ಅಂತ ಕರೆದಾಗ ನೀನು
ಮಾತಿನ ಕೋಟೆಯಲಿ ನನ್ನ ಬಂಧಿಸಿದೆ
ನಿನ್ನನೆ ಈಗ ಮನಸು ಬಯಸಿದೆ

ಹಾಡಿತಿದ್ದೆ ಆಗ  ನಾನು
ಕುಣಿಯುತಿದ್ದೆ ಅಂದು ನೀನು
ಕೇಳುತಿರುವೆ ಈಗ ನಾನು
ನನ್ನ ನೀ ಪ್ರೀತಿಸುವೆಯೇನು.......

ಕೊನೆಯ ಮಾತು

ನೀರಿನ ಮೇಲಿನ ಚಂದ್ರನೀಗ
ಅಲೆಯು ಬಂದು ಚಿದ್ರನಾದ
ಜಗವ ಬೆಳಗುವ ಸೂರ್ಯನೀಗ
ಮೋಡ ಕವಿದು ಮಂಕಾದ.........

ಕಣ್ಣಲ್ಲಿ ಕಂಡ ನೀರ ಹನಿಯು
ಕೆನ್ನೆಯನಪ್ಪಿ ಇಳಿಯಿತೆ?
ಮನದಿ ಬಂದ ನೋವ ಮಾತು
ಗಂಟಲಲ್ಲೆ ಕರಗಿತೆ?............

ಜೀವ ಜಲವು ಕೂಡ ನನಗೆ
ವಿಷವಾಗಿ ಪ್ರಾಣ ತೆಗೆಯಿತೆ
ಮುದವ ನೀಡೊ ಮಂಜು ಕೂಡ
ಬೆಂಕಿಯ ಬಿರುಗಾಳಿಯಾಯಿತೆ.......

ಕೊನೆಯ ಬದುಕ ಬದುಕಿರುವೆ
ಕೊನೆಯ ಮಾತು ಕೇಳುತಿರುವೆ
ಕೊನೆಯ ಸಾಲು ಬರೆಯುತಿರುವೆ
... ನಿನಗೆ ನಾ ಬೇಡವಾದೆನೆ?...

Saturday 1 October, 2011

ಓ ಮನವೆ

ಮಳೆಯ ಮೊದಲ ಹನಿಯಂತೆ
ಮಧುರ ಸ್ಪರ್ಶವದು ನೀ ನನಗೆ
ನಡು ಬೇಸಿಗೆ ಬಿಸಿಲಂತೆ
ಉರಿ ತಾಪವೆ ನಾ ನಿನಗೆ..........

... ನಗುವ ಆ ಮೊಗದಿ ಚಂದ್ರನ ಕಂಡೆ
ತುಸು ಕೋಪವೆ ನಿನಗಾಭರಣವೆಂದೆ
ಯಾಕೆ ಮರೆ ಮಾಚುವೆ ಕಂಡೊಡನೆ ನನ್ನ
ಮರೆಮಾಚ ಬೇಡ ಅದು ನಿನಗೆ ಚೆನ್ನ.......

ನಾ ಚಿನ್ನ ರನ್ನ ಎಂದು
ಹೇಳಿಕೊಂಡು ನಿನ್ನಿಂದೆ ಬರಲಾರೆ
ತುಂಬು ಮುಖದ ಅಂದವನಿಂದು
ಹೊಗಳದೆ ಇನ್ನೆಂದು ಇರಲಾರೆ........

ದಯಮಾಡಿ ಕೆಳುತಿರುವೆ ನನ್ನ ನಲ್ಲೆ
ತುಂಬು ನಗು ಮೊಗದ ಚಂದದ ಬಾಲೆ
ನಿನಗಾಗಿ ಕಾಯುತಿರುವ ಪ್ರೇಮಿ ನಾನು
ನೀ ಬೇಡವೆಂದರೆ ನಾ ಬದುಕಿರುವೆನೆನು.....